ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕರ್ನಾಟಕ ಸರ್ಕಾರದಿಂದ 2009ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯಿದೆ 2005 (2006ರ ಸಂಖ್ಯೆ 4) ರಡಿಯಲ್ಲಿ ರಚಿಸಲಾಗಿದ್ದು, ಇದೊಂದು ಸ್ವತಂತ್ರ ಶಾಸನಬದ್ಧ ಅಂಗ ಸಂಸ್ಥೆಯಾಗಿರುತ್ತದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ (ಗಓಅಖಅ) ಭಾರತ ಸರ್ಕಾರವು 11 ಡಿಸೆಂಬರ್ 1992ರಲ್ಲಿ ಸ್ಪಷ್ಠಪಡಿಸಿರುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಪೋಷಣೆ ಮತ್ತು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸನಬದ್ಧ ಹಾಗೂ ಸ್ವಾಯತ್ತ ಸಂಸ್ಥೆಯಾಗಿ ಆಯೋಗವು ಕಾರ್ಯನಿರ್ವಹಿಸುವುದರ ಜೊತೆಗೆ ಕಡ್ಡಾಯ ಮತ್ತು ಶಿಕ್ಷಣ ಹಕ್ಕು ಕಾಯಿದೆ(ಆರ್.ಟಿ.ಈ.)2009, ಮಕ್ಕಳ ಪಾಲನೆ ಪೋಷಣೆ ಮತ್ತು ರಕ್ಷಣೆ ಕಾಯಿದೆ2006, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯಿದೆ(ಪೋಕ್ಸೋ) 2012ರ ಉಸ್ತುವಾರಿ ಜವಬ್ದಾರಿಯನ್ನು ಹೊಂದಿದ್ದು, ಮಕ್ಕಳ ಪರವಾದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಾಮರ್ಶಿಸಿ, ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವ ಜವಬ್ದಾರಿಯನ್ನು ಆಯೋಗ ಹೊಂದಿದೆ.
ನಕ್ಷೆಯಲ್ಲಿ ನಮ್ಮನ್ನು ವೀಕ್ಷಿಸಿ